  ಮೂಲದೊಡನೆ ಪರಿಶೀಲಿಸಿ

ಅಧಿಚಕ್ರ

ಚಿತ್ರದಲ್ಲಿ ಕಾಣಿಸಿರುವಂತೆ ಒಂದು ದೊಡ್ಡ ವೃತ್ತದ (Pಕಿಖ) ಪರಿಧಿಯ ಮೇಲೆ ಚಲಿಸುವಕೇಂದ್ರವಿರುವ ಚಿಕ್ಕವೃತ್ತ (ಂಃಅ) (ಎಪಿಸೈಕಲ್). ದೊಡ್ಡ ವೃತ್ತದ ಹೆಸರು ಡೆಫರೆಂಟ್. ಆಕಾಶಗೋಳದ ಕೇಂದ್ರ ಭೂಮಿ; ಭೂಮಿ ಸ್ಥಿರವಾಗಿದೆ; ಅದರ ಸುತ್ತಲೂ ಚಂದ್ರ, ಬುಧ, ಶುಕ್ರ, ಸೂರ್ಯ ಮುಂತಾದವು ಅದೇ ಕ್ರಮದಲ್ಲಿ ಪರಿಭ್ರಮಿಸುತ್ತಿವೆ ಎಂಬ ಟಾಲೆಮಿ ಸಿದ್ಧಾಂತವನ್ನು (ಸು. ಕ್ರಿ.ಶ.150) ಗಣಿತರೀತ್ಯಾ ಸಮರ್ಥಿಸಲು ಅಧಿಚಕ್ರದ ಅವಶ್ಯಕತೆ ಉಂಟಾಯಿತು. ಒಂದೊಂದು ಗ್ರಹಕ್ಕೆ ಒಂದೊಂದು ಅಧಿಚಕ್ರವಿದೆಯೆಂದೂ ಒಂದೊಂದು ಅಧಿಚಕ್ರಕ್ಕೆ ಒಂದೊಂದು ಡೆಫರೆಂಟ್ ಇದೆಯೆಂದೂ ಇಂಥ ಡೆಫರೆಂಟ್‍ಗಳ ಕೇಂದ್ರ ಭೂಕೇಂದ್ರದಿಂದ ಸ್ವಲ್ಪ ಬೇರೆ ಎಂದೂ ಟಾಲೆಮಿ ಸಿದ್ಧಾಂತದ ವಾದ. ಈಗ ಅಧಿಚಕ್ರಕ್ಕೆ ಕೇವಲ ಐತಿಹಾಸಿಕಮಹತ್ವ ಮಾತ್ರ ಉಳಿದಿದೆ. 

ಚಿತ್ರ-1
(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ